ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......
ಸತ್ಯ ಹೊರಬರುತ್ತಿದೆ ನೋಡಿ.
ರಾಜಕಾರಣಿಗಳ "ಆಂತರಿಕ" ಅಡ್ಜೆಸ್ಟ್ ಮೆಂಟ್ ಗಳನ್ನು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲೇ ಬಹಿರಂಗವಾಗಿಹೇಳಿಕೊಳ್ಳುತ್ತಿದ್ದಾರೆ.
ಅಡ್ಜೆಸ್ಟ್ ಮೆಂಟ್ ಬಗ್ಗೆ ಪ್ರಸ್ತಾಪಿಸಿದವರು ಎದೆತಟ್ಟಿಕೊಂಡು ಹೇಳಿಕೊಂಡರೆ,
ತನ್ನ ನ್ನು ಉದ್ದೇಶಿಸಿಯೇ, ತಮ್ಮ ಹೆಸರನ್ನು ಪ್ರಸ್ತಾಸುತ್ತಿದ್ದರೂ, ಪ್ರತಿಕ್ರಿಯೆ ಕೊಡದೇ
ಅಡ್ಜೆಸ್ಟ್ ಮೆಂಟ್ ಮಾಡಿಕೊಂಡೇ ಕುಳಿವರು ಮತ್ತೊಬ್ಬರು.
ಹೇಗಿದೆ ಸ್ವಾಮಿ, ನಮ್ಮ ನಾಡಿನ ರಾಜಕೀಯ.
ಏನು ಮಾಡೋ ಹಾಗೆಯೇ ಇಲ್ಲ. ಅಡ್ಜೆಸ್ಟ್ ಮಾಡಿಕೊಳ್ಳದಿದ್ದರೆ.
ನಾವು ಜನರೂ ಸಹ ಅಡ್ಜೆಸ್ಟ್ ಮಾಡಿಕೊಂಡೇ ಇದ್ದು ಬಿಡೋಣ. ನಾವೇನೂ ಮಾಡಿಕೊಳ್ಳಕ್ಕಾಗುತ್ತೆ ಅಲ್ವಾ ?
ಎಲ್ಲವೂ ಅಡ್ಜೆಸ್ಟ್.... ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......ಅಡ್ಜೆಸ್ಟ್ಮೆಂಟ್......
(ವಿ.ಸೂಚನೆ : ಆತ್ಮೀಯ ಗೆಳೆಯರೇ, ಅಡ್ಜೆಸ್ಟ್ ಮೆಂಟ್ ನ್ನು ಹೇಳಿದವರ, ಅಡ್ಜೆಸ್ಟ್
ಮೆಂಟ್ ಮಾಡಿ ಕೊಂಡು ಸುಮ್ಮನಿದ್ದವರ ಅಭಿಮಾನಿಗಳು ತಪ್ಪು ತಿಳಿಯಬಾರದು.
ಇದು ನಾನು ಕಲ್ಪನೆ ಮಾಡಿಕೊಂಡು ಬರೆದ್ದದ್ದು ಅಲ್ಲ.
ಅವರುಗಳೇ ಹೇಳಿಕೊಂಡ ಬಹಿರಂಗ ಸತ್ಯ. . ಸುಮ್ನೆ ಹಾಗೆ ಬರೆದುಕೊಂಡಿದ್ದೇನೆ.
ಅಡ್ಜೆಸ್ಟ್ ಮಾಡಿಕೊಳ್ಳಿ. ದಯವಿಟ್ಟು.)
ರಾಜು ವಿನಯ್ ದಾವಣಗೆರೆ

ಸೆಪ್ಟೆಂಬರ್ ಪ್ರಳಯ!
ಹೀಗೊಂದು ಕಾರ್ಯಕ್ರಮ "ಪಬ್ಲಿಕ್ ಟಿವಿ" ಯಲ್ಲಿ ರಾತ್ರಿ 10 ರ ನಂತರ ಮೂಡಿ ಬರುತ್ತಿದೆ.
* ಕಳೆದ ವರ್ಷ ಡಿಸೆಂಬರ್ 21 ಕ್ಕೆ ಪ್ರಳಯ ಆಗೇ ಹೋಯ್ತು. ಅಂತ "ಪ್ರಳಯ ಫಿಕ್ಸ್" ಅಂತ
ಕೌನ್ಟ್ ಡೌನ್ ನಲ್ಲಿ ಜ್ಯೋತಿಷ್ಶಾಸ್ರ್ತ, ವೈಜ್ಞಾನಿಕ ವರದಿಗಳು, ಘಟನೆಗಳನ್ನು
ಪ್ರತಿದಿನವೂ ತೋರಿಸಿ ತೋರಿಸಿ, ಜನರಲ್ಲಿ ಗೊಂದಲ, ಭೀತಿ ಹುಟ್ಟಿಸಿದ್ದವರು......
ಡಿಸೆಂಬರ್ 21ರ ನಂತರ ಪೂರ್ತಿಯಾಗಿ "ಯೂ" ಟರ್ನ್" "ಪ್ರಳಯ ಮಿಸ್" ಎಂಬ ಮಾಲಿಕೆಯಲ್ಲಿ ಕಾರ್ಯಕ್ರಮ ಮಾಡಿಯಾಯಿತು.
*ಈಗ ಮತ್ತೆ ಪ್ರಳಯದ ಭೀತಿಯನ್ನುತ್ತೊಕೊಂಡು ಬಂದು ಮತ್ತದೇ "ಪಬ್ಲಿಕ್ ಟಿವಿ"
ಸೆಪ್ಟೆಂಬರ್ ಪ್ರಳಯ" ಅಂತ ಜನರ ಮುಂದೆ ಹೇಳಲು ನಿಂತಿದೆ.
_____________________________________________________
* ಮತ್ತೇ ಬಂದಿದ್ದೇನೆ ನೋಡಿ ಅಂತ ಪಬ್ಲಿಕ್ ಟಿವಿ ಮೂಲಕ ಬಂದ ರಂಗಣ್ಣ (ಹೆಚ್. ಆರ್.
ರಂಗನಾಥ್) ರವರಿಗೆ ತಮ್ಮ ಟಿವಿಯ TRP ಹೆಚ್ಚಿಸಿಕೊಳ್ಳಲು ಬೇರೆ ಮಾರ್ಗವೇ ಸಿಗಲಿಲ್ಲವೇ
?
ಜನರಲ್ಲಿ ಇಲ್ಲ ಸಲ್ಲದ ಭೀತಿಯನ್ನು ಉಂಟು ಮಾಡಿ ಸಾಧಿಸುವುದಾದರೂ ಏನನ್ನು ?
* ಕೆಲಸಕ್ಕೆ ಬಾರದ ವಿಷಯವನ್ನು ಹಾದಿ ಬೀದಿ ಜ್ಯೋತಿಷಿಗಳನ್ನು ಕರೆತಂದು ಅವರಿಂದ ಬೇಡದ
ವಿಷಯಗಳ ಬಗ್ಗೆ ಹೇಳಿಸಿ, ಅವರನ್ನೂ ವೇದಿಕೆಗೆ ತಂದು ಅವರ ಜೇಬುಗಳನ್ನು ತುಂಬಿಸಲು ಸಹಾಯ
ಮಾಡಿ, ನೀವು ಸಹ TRP ಯ ಬೆನ್ನೇರಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೀಗೆಲ್ಲಾ ಸರ್ಕಸ್
ಮಾಡಬೇಕಿತ್ತೇ ?
* ಪ್ರತಿ ದಿನ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ನಿಮ್ಮ
ಪಕ್ಕ ಮತ್ತೊಬ್ಬ ವಾಚಕರನ್ನು ಕೂರಿಸಿಕೊಂಡು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ
ನಡೆಸುತ್ತೀರಿ. ನಿಮ್ಮ ಪಕ್ಕ ಕುಳಿತವರು "ನೀವು ಹೇಳುವ ಹರಿಕಥೆಯನ್ನು
ಕೇಳಿಸಿಕೊಳ್ಳುತ್ತಾ ತಲೆಯಾಡಿಸುತ್ತಾ ಇರುತ್ತಾರೆ.
ಸ್ಟುಡಿಯೋದಲ್ಲಿ ರಾಜಕಾರಣಿಗಳನ್ನು, ವ್ಯವಸ್ಥೆಯನ್ನು ಕಟುವಾಗಿ ಟೀಕಿಸುವ ನೀವು,
ಆ ಒಂದು ಘಂಟೆ ಕಳೆದು ಹೋದರೆ ಸಾಕು ಎನ್ನುವುದಕಷ್ಟೇ ಸೀಮಿತ ವಾದಂತಿದೆ. "
ಈ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ಯಾವತ್ತಾದರೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೀರಾ?
ವಿಧಾನಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಕೋಟಿ ಗಟ್ಟಲೇ ಹಣ ಖರ್ಚು ಮಾಡುತ್ತಾನೆ ಅಂತ
ವಿಶ್ಲೇಷಿಸುವ ನೀವು, ಗೆದ್ದ ಅದೇ ರಾಜಕಾರಣಿಯನ್ನು ರತ್ನಗಂಬಳಿ ಹಾಸಿ ನಿಮ್ಮ
ಸ್ಟುಡಿಯೋಕ್ಕೆ ಕರೆತಂದು ಆತಿಥ್ಯ ನೀಡಿ, ಅವರಿಗೆ ಪ್ರಚಾರ ನೀಡುತ್ತೀರಿ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪೈಪೋಟಿಗೆ ಬಿದ್ದಂತೆ. "ಪಬ್ಲಿಕ್ ಲೆಕ್ಕಾಚಾರ" ಅಂತ
ವಿಶ್ಲೇಷಿಸಿದ ನೀವು, ಕೇವಲ ನಾಲ್ಕು ಮತ್ತೊಂದು ಪಕ್ಷಗಳಿಗೆ ಸ್ಟುಡಿಯೋ ವೇದಿಕೆಯಲ್ಲಿ
ಅವಕಾಶ ನೀಡಿದರೆ ವಿನಃ ರಾಜಕೀಯ ವ್ಯವಸ್ಥೆ ಬದಲಾಗಬೇಕು ಅನ್ನೋ ನೀವು ಪ್ರಾಮಾಣಿಕವಾಗಿ
ಚುನಾವಣೆಗೆ ಸ್ಪರ್ಧಿಸಿದ್ದ. ಆಮ್ ಆದ್ಮಿ ಪಕ್ಷ, ಲೋಕಸತ್ತಾ ಪಕ್ಷವನ್ನಾಗಲೀ, ಒಬ್ಬ
ಒಬ್ಬನೇ ಪಕ್ಷೇತರರನ್ನು ಸ್ಟುಡಿಯೋಗೆ ಕರೆತಂದು ಮಾತಾಡಿಸಿದಿರೆ. ಇಲ್ಲ.
ನಿಮಗೆ ಈ ವ್ಯವಸ್ಥೆ ಬದಲಾಗೋದು ಬೇಡ ಅನ್ನಿಸುತ್ತೆ.
ರಂಗನಾಥ್ ರವರೇ, ಇವತ್ತು ನಿಮಗೆ ನಿಮ್ಮ ಟಿವಿ ವಾಹಿನಿಗಳಿಗೆ ಬೇಕಾಗಿರೋ TRP ಆಕ್ಸಿಜನ್
ಗಾಗಿ ದಿಢೀರ್ ಸುದ್ಧಿಗಳು ಬೇಕು ನಿಜ. ಹಾಗಂತ ನಿಮಗಿರುವ ಜವಾಬ್ದಾರಿಯನ್ನು ಮರೆತು
ಕಾರ್ಯ ನಿರ್ವಹಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನಿಸುತ್ತೆ.
ನೀವು ಸ್ವತಂತ್ರರು, ಯಾರಿಗೂ ಸಲಾಂ ಹೊಡೆಯುವ ಪ್ರಮೇಯವೇ ಇಲ್ಲದಂತವರು.
ಸ್ವಲ್ಪ ಕಾಳಜಿ ವಹಿಸಿ, ಈ ನಾಡಿನ ಜನರ ಬಗ್ಗೆ, ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ
ಚಿಂತಿಸಿ, ಪ್ರಯತ್ನಿಸಿದರೆ ನೀವು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವುದಕ್ಕೆ
ಸಾರ್ಥಕವಾಗಬಹುದು.
* ಒಬ್ಬ ಕಾಳೀಸ್ವಾಮಿಯನ್ನು ರಹಸ್ಯ ಕಾರ್ಯಾಚರಣೆಯಲ್ಲಿ ನಿಜರೂಪ ಬಯಲು ಮಾಡಿದ ನೀವು
ಅಂತದ್ದೆ ವ್ಯಕ್ತಿ "ಬಿಗ್ ಬಾಸ್ " ಎಂಬ ಕಾರ್ಯಕ್ರಮದಲ್ಲಿ ಬೇಕಾ ಬಿಟ್ಟಿಯಾಗಿ
ಕಾಣಿಸಿಕೊಂಡ, ಸ್ವಯಂ ಘೋಷಿತ "ಬ್ರಹ್ಮಾಂಡ ನರೇಂದ್ರ ಶರ್ಮ"ಎಂಬ ದಢೂತಿ ವ್ಯಕ್ತಿಯನ್ನು
ಕರೆತಂದು ನಿಮ್ಮ ಟಿವಿಯಲ್ಲಿ ನಿರಂತರ ಕಾರ್ಯಕ್ರಮವನ್ನು ನೀಡಲು ತಯಾರಾಗುತ್ತಿದ್ದೀರಿ
ಎಂದರೆ,
ರಂಗನಾಥ್ (ರಂಗಣ್ಣ) ನವರೇ ನಿಮ್ಮಲ್ಲಿರುವ ಪತ್ರಿಕೋದ್ಯಮದ ಮೌಲ್ಯಗಳು ಎಲ್ಲವೂ ಮಾಯವಾದುವು ಅಂತ ತಿಳಿದುಕೊಳ್ಳಬಹುದೇ ?
* ಬಣ್ಣ ಹಚ್ಚಿ ನಾಟಕ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ನಾಟಕರಂಗದಂತೆ.
ನೀವು ಯಾಕೆ ಇಲ್ಲದ ಪ್ರಳಯಗಳನ್ನು ಸೃಷ್ಠಿ (ಸೆಪ್ಟೆಂಬರ್ ಪ್ರಳಯ) ಮಾಡಿ ಜನರಿಗೆ ಭೀತಿ
ಹುಟ್ಟಿಸುತ್ತೀರಿ. ಸೆಪ್ಟೆಂಬರ್ ನಂತರ ಮತ್ತೇನನ್ನು ಸೃಷ್ಟಿಸುತ್ತೀರೋ ..... ಕಾದು
ನೋಡಬೇಕು.
****************************************************
ಇತ್ತೀಚಿಗೆ ದೃಶ್ಯ ಮಾಧ್ಯಮಗಳಲ್ಲಿ ವಾರ್ತಾ ವಾಚಕರು, ವರದಿಗಾರರು, ಆ ವಾಹಿನಿಯಿಂದ ಈ
ವಾಹಿನಿಗೆ, ಈ ವಾಹಿನಿಯಿಂದ ಆ ವಾಹಿನಿಗೆ ಸ್ಥಾನ ಪಲ್ಲಟವಾಗುತ್ತಿರುವುದನ್ನು ಕಳೆದೊಂದು
ತಿಂಗಳಿಂದ ನೋಡುತ್ತಿದ್ದೇವೆ.
(ಟಿವಿ9 ನಲ್ಲಿ ದ್ದವರು- ಸುವರ್ಣಕ್ಕೆ, ಸುರ್ಣದಲ್ಲಿದ್ದವರು-ಜನಶ್ರೀ- ಪಬ್ಲಿಕ್ ಟಿವಿಗೆ ಜನಶ್ರೀಯಲ್ಲಿದ್ದವರು ಸುವರ್ಣದಲ್ಲಿ ಕಾಣಿಸಿಕೊಂಡಿದ್ದಾರೆ)
ದೃಶ್ಯ ಮಾಧ್ಯಮಗಳಲ್ಲಿ ಪ್ರಾಮಾಣಿಕ ಯುವ ಪತ್ರಕರ್ತರಿದ್ದಾರೆ ಕೆಲವರಿಗೆ ಪತ್ರಿಕೋದ್ಯಮ
ಸಾಕಾಗಿ ಬೇಡ ಅಂತ ಅನ್ನಿಸಿದವರೂ ಇದ್ದಾರೆ. ಅಂತಹ ಪ್ರಾಮಾಣಿಕ ಯುವ ಪತ್ರಕರ್ತರಿಗೆ
ಮಾರ್ಗದರ್ಶಿಯಾಗಿ, ಮಾದರಿಯಾಗಿ ನೀವು ಪ್ರಾಮಾಣಿಇಕ ಪ್ರಯತ್ನ ಮಾಡಿದರೆ ಏನನ್ನು ಬೇಕದರೂ
ಸಾಧಿಸಿತೋರಿಸಬಹುದು. ಆ ಶಕ್ತಿ ನಿಮ್ಮಲ್ಲಿದೆ. ನೋಡಿ ಯೋಚಿಸಿ.
******************************************************
ಅನುಭವಿ, ಪ್ರಾಮಾಣಿಕ, ಹಿರಿಯ ಪತ್ರಕರ್ತರಾದ ನಿಮ್ಮಂತಹವರೇ ಹೀಗಾದ್ರೆ ಯಾರನ್ನು ನಂಬಬೇಕು ರಂಗಣ್ಣನವರೇ...
ರಾಜು ದಾವಣಗೆರೆ